ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರಕ್ಕೆ ಪಾದಯಾತ್ರೆ, ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಾದಿಗಳು – KONKANCATHOLIC.COM

ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರಕ್ಕೆ ಪಾದಯಾತ್ರೆ, ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಾದಿಗಳು

February 18, 2024

ಮಂಗಳೂರು, ಫೆ. 18: ಕಥೋಲಿಕ್ ಸಭಾ ಮಂಗಳೂರು (ರಿ) ಇವರ ಆಶ್ರಯದಲ್ಲಿ ಮಂಗಳೂರು ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ವಿಚಾರಣಾ ಕೇಂದ್ರಗಳು ಹಾಗೂ ಎಲ್ಲಾ ಆಯೋಗಗಳ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಮೆರ್ಸಿ ಅಮ್ಮ ಅವರ ದೇವಾಲಯ ಉಳ್ಳಾಲ್ ಪಾನೀರ್ ಇಲ್ಲಿಂದ ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರ ಮುಡಿಪು ಇಲ್ಲಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪ್ರಾಯಶ್ಚಿತ್ತ ಕಾಲದಲ್ಲಿ ಕಥೋಲಿಕ ಕ್ರೈಸ್ತರು ಜೀವನ ಪರಿವರ್ತನೆಗಾಗಿ ಹಾಗೂ ತ್ಯಾಗ ಮತ್ತು ಒಳ್ಳೆಯ ಕೆಲಸ ಮಾಡಿ ದೇವರ ಅನುಗ್ರಹ ಪಡೆಯಲು ಈ ಯಾತ್ರೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊoಡರು.

ಸರಿ ಸುಮಾರು ನಾಲ್ಕು ಶತಮಾನಗಳ ಹಿಂದೆ ಪಾನೀರ್ ಧರ್ಮ ಕೇಂದ್ರದಲ್ಲಿ ಸೇವೆ ಸಲ್ಲಿಸಿ , ಮುಡಿಪು ಬೆಟ್ಟದಲ್ಲಿ ಅವರ ಆತ್ಮ ಪರೀಕ್ಷೆ ಯ ವೇಳೆಯಲ್ಲಿ ನಡೆದ ಅದ್ಭುತ ನೆನೆದು, ಅವರು ನಡೆದ ದಾರಿಯನ್ನು ಇಂದು ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ ಎಂದು ಕಥೋಲಿಕ್ ಸಭಾ ಮಂಗಳೂರು ಕೇಂದ್ರೀಯ ಸಭೆಯ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜ ಪಾನೀರ್ ಇವರು ತಿಳಿಸಿದರು.

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಕೇಂದ್ರೀಯ ಅಧ್ಯಕ್ಷರಾದ ಆಲ್ವಿನ್ ಡಿಸೋಜರವರ ನೇತೃತ್ವದಲ್ಲಿ ಇವತ್ತು ಪಾನೀರ್ ಚರ್ಚ್ ನ ಫಾದರ್ ವಿಕ್ಟರ್ ಡಿಮೆಲ್ಲೊರವರು ಪಾದಯಾತ್ರೆ ಉದ್ಘಾಟನೆ ಮಾಡಿದರು.ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ಆಧ್ಯಾತ್ಮಿಕ ನಿರ್ದೇಶಕರಾದ ಫಾದರ್ ಅಸ್ಸಿಸ್ಸಿ ರೆಬೆಲ್ಲೊರವರು ಹಾಗೂ ದಕ್ಷಿಣ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ಫಾದರ್ ಎಡ್ವರ್ಡ್ ಮೋನಿಸ್, ಫಜೀರು ಚರ್ಚಿನ ವಂದನಿಯ ಜೊನ್ ವಾಸ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹಲವಾರು ಧರ್ಮಭಗಿನಿಯರು, ಧರ್ಮಗುರುಗಳು, ಹಾಗೂ ಹಲವಾರು ಭಕ್ತಾಧಿಗಳು ಭಾಗವಹಿಸಿದರು.