ಅಲೋಶಿಯಸ್ ವಿವಿಯಲ್ಲಿ ಅಂತರಾಷ್ಟ್ರೀಯ ಮಾತೃಭಾಷಾ ದಿನ – KONKANCATHOLIC.COM

ಅಲೋಶಿಯಸ್ ವಿವಿಯಲ್ಲಿ ಅಂತರಾಷ್ಟ್ರೀಯ ಮಾತೃಭಾಷಾ ದಿನ

February 28, 2025

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ  ಮತ್ತು ಭಾಷೆ ಸಂಸ್ಕೃತಿ ಅಧ್ಯಯನ ನಿಕೇತನಗಳ ನೇತೃತ್ವದಲ್ಲಿ ಫೆಬ್ರವರಿ 21ರಂದು ಅಂತರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಯಿತು. ವಿವಿಯ ಕುಲಸಚಿವರಾದ ಡಾ ರೊನಾಲ್ಡ್ ನಜರೆತ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತೃಭಾಷೆಯ ಮಹತ್ವವನ್ನು ವಿವರಿಸಿದರು.

ಕನ್ನಡ ವಿಭಾಗದ  ಹಿರಿಯ ಪ್ರಾಧ್ಯಾಪಕರಾದ ಡಾ ವಿಶ್ವನಾಥ ಬದಿಕಾನರು ಮಾತೃಭಾಷೆ ಮತ್ತು ಸಂಸ್ಕೃತಿಗೆ ಇರುವ ಸಂಬಂಧವನ್ನು ವಿವರಿಸಿದರು. ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರು, ಕನ್ನಡ ಸಂಘ ಮತ್ತು ವಿಕಿಪೀಡಿಯ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಡಾ ಪ್ರಭುಕುಮಾರ್ ಕಾರ್ಯಕ್ರಮ
ನಿರ್ವಹಿಸಿದರು.

ವಿದ್ಯಾರ್ಥಿಗಳಿಂದ ಮಾತೃಭಾಷೆಗಳ ಅಭಿವ್ಯಕ್ತಿಯ ಹಾಡುಗಳು, ಮಾತೃಭಾಷೆ ಕುರಿತಾದ ರಸಪ್ರಶ್ನೆ ಇತ್ಯಾದಿ ವಿವಿಧ ಚಟುವಟಿಕೆಗಳ ಮೂಲಕ ಮಾತೃಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು.